ಸಾಕ್ಷಿ ತನ್ವರ್ ರವರು ಒಬ್ಬ ಭಾರತೀಯ ನಟಿ.'ಕಹಾನಿ ಘರ್ ಘರ್ ಕೀ' ಹಾಗೂ 'ಬಡೇ ಅಚ್ಛೆ ಲಗ್ತೇ ಹೇಂ' ಧಾರವಾಹಿಗಳಲ್ಲಿ ಕೆಲಸ ಮಾಡಿದ್ದಾರೆ.ಅವರು ಅನೇಕ ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. == ಆರಂಭಿಕ ಜೀವನ == ಸಾಕ್ಷಿ ತನ್ವರ್ ರವರು ೧೨ ಜನವರಿ ೧೯೭೩ ರಂದು ರಾಜಸ್ಥಾನ್, ಅಲ್ವಾರ್ ನ ಮಧ್ಯಮವರ್ಗದ ಕುಟುಂಬದಲ್ಲಿ, ನಿವೃತ್ತ ಸಿಬಿಐ ಅಧಿಕಾರಿ ರಾಜೇಂದ್ರ ಸಿಂಗ್ ತನ್ವರ್ ಗೆ ಜನಿಸಿದರು.ನವದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಿಂದ ಪದವೀಧರರಾಗುವ ಮೊದಲು ಕೇಂದ್ರೀಯ ವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿದರು.ಇದಕ್ಕೆ ಮುಂಚಿತವಾಗಿ ೧೯೯೦ ರಲ್ಲಿ ತನ್ನ ಪದವಿ ಪೂರ್ವ ಶಿಕ್ಷಣದ ನಂತರ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸೇಲ್ಸ್ ಟ್ರೈನಿಯಾಗಿಯೂ ಕೆಲಸ ಮಾಡಿದರು.ಅವರು ನಾಟಕೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿದ್ದರು.೧೯೯೮ ರಲ್ಲಿ ದೂರದರ್ಶನ ಪ್ರಸಾರದ ಚಲನಚಿತ್ರಗೀತೆ ಆಧಾರಿತ ಕಾರ್ಯಕ್ರಮ 'ಅಲ್ಬೇಲಾ ಸುರ್ ಮೇಲಾ' ಗೆ ಆಡಿಷನ್ ನೀಡಿ ಪ್ರೆಸೆಂಟರ್ ಆಗಿ ಆಯ್ಕೆಯಾದರು.೨೦೧೮ ರಲ್ಲಿ ಒಂಬತ್ತು ತಿಂಗಳ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಆ ಮಗುವಿಗೆ ದಿತ್ಯಾ ತನ್ವರ್ ಎಂದು ಹೆಸರಿಟ್ಟರು. == ವೃತ್ತಿ ಜೀವನ == ೧೯೯೮ ರಲ್ಲಿ 'ಅಲ್ಬೇಲಾ ಸುರ್ ಮೇಲಾ' ದಲ್ಲಿ ಚೊಚ್ಚಲ ಪ್ರದರ್ಶನದ ನಂತರ ತನ್ವರ್ ರವರು 'ಕಹಾನಿ ಘರ್ ಘರ್ ಕೀ' ಎಂಬ ಧಾರಾವಾಹಿಯಲ್ಲಿ ಪಾರ್ವತಿ ಅಗರ್ವಾಲ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.೨೦೧೧ ಮತ್ತು ೨೦೧೪ ರ ನಡುವೆ 'ಬಡೇ ಅಚ್ಛೆ ಲಗ್ತೇ ಹೇಂ' ನಲ್ಲಿ ಪ್ರಿಯಾ ಕಪೂರ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದರು.ಡಿಸೆಂಬರ್ ೨೦೧೨ ರಲ್ಲಿ, 'ಕೌನ್ ಬನೇಗಾ ಕ್ರೋರ್ಪತಿ' ಯಲ್ಲಿ ಕಾಣಿಸಿಕೊಂಡಿದ್ದಾರೆ.೨೦೧೬ ರಲ್ಲಿ ದಂಗಲ್ ಚಿತ್ರದಲ್ಲಿ ಅಮೀರ್ ಖಾನ್ ಪತ್ನಿ ದಯಾ ಕೌರ್ ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ. == ಫಿಕ್ಷನ್ ಪ್ರದರ್ಶನಗಳು == ೨೦೦೦-೦೮ ರಲ್ಲಿ 'ಕಹಾನಿ ಘರ್ ಘರ್ ಕೀ', ಪಾರ್ವತಿ ಅಗರ್ವಾಲ್ ಪಾತ್ರ. ೨೦೦೧-೦೨ ರಲ್ಲಿ 'ಕುಟುಂಬ್', ಮಾಯಾ ಮಿಟ್ಟಲ್ ಪಾತ್ರ. ೨೦೦೩ ರಲ್ಲಿ 'ದೇವಿ', ಗಾಯತ್ರಿ ಪಾತ್ರ. ೨೦೦೪ ರಲ್ಲಿ 'ಜಸ್ಸಿ ಜೈಸಿ ಕೋಯಿ ನಹೀಂ', ಇಂದಿರಾ ಭಾರ್ಗವ್ ಪಾತ್ರ. ೨೦೦೮ ರಲ್ಲಿ 'ಬವಂದರ್' (ಒಂದು ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ). ೨೦೦೮ ರಲ್ಲಿ 'ಕಹಾನಿ ಹಮಾರೆ ಮಹಾಭಾರತ್ ಕಯಸ್', ಗಂಗಾ ಪಾತ್ರ. ೨೦೧೦ ರಲ್ಲಿ 'ಬಾಲಿಕಾ ವಧು', ತೀಪ್ರಿಯಾಗಿ. ೨೦೧೧-೧೪ ರಲ್ಲಿ 'ಬಡೇ ಅಚ್ಛೆ ಲಗ್ತೇ ಹೇಂ', ಪ್ರಿಯಾ ಕಪೂರ್ ಪಾತ್ರ. ೨೦೧೩ ರಲ್ಲಿ 'ಏಕ್ ಥಿ ನಾಯಿಕ'(೧೩ ಮತ್ತು ೧೪ ನೇ ಸಂಚಿಕೆಗಳಲ್ಲಿ) ಪೂಜಾ ಪಾತ್ರ. ೨೦೧೪ ರಲ್ಲಿ 'ಮೇ ನಾ ಭೂಲೂಂಗಿ'(ಮೊದಲನಯ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ). ೨೦೧೬:೨೪-ಸೀಸನ್ ೨, ಶಿವಾನಿ ಮಲಿಕ್ ಪಾತ್ರ. ೨೦೧೭ ರಲ್ಲಿ 'ಕರ್ಲೇ ತೂಭಿ ಮೊಹಬ್ಬತ್', ತ್ರಿಪುರಾ ಸುಂದರಿ ಪಾತ್ರ(ರಾಮ್ ಕಪೂರ್ ಜೊತೆ). ೨೦೧೯ ರಲ್ಲಿ 'ದಿ ಫೈನಲ್ ಕಾಲ್'. == ನಾನ್-ಫಿಕ್ಷನ್ ಪ್ರದರ್ಶನಗಳು/ರಿಯಾಲಿಟಿ ಪ್ರದರ್ಶನಗಳು == ೧೯೯೮ ರಲ್ಲಿ 'ಅಲ್ಬೇಲಾ ಸುರ್ ಮೇಲಾ', ಹೋಸ್ಟ್ ಆಗಿ. ೨೦೦೫ ರಲ್ಲಿ 'ಕೌನ್ ಬನೇಗಾ ಕ್ರೋರ್ಪತಿ ೨', ಅತಿಥಿ ಸ್ಪರ್ಧಿಯಾಗಿ(ಸ್ಮೃತಿ ಇರಾನಿ ಜೊತೆ). ೨೦೦೯ ರಲ್ಲಿ 'ಕಾಫಿ ಹೌಸ್', ಸ್ವತಃ. ೨೦೧೦ ರಲ್ಲಿ 'ಕ್ರೈಮ್ ಪಾಟ್ರೊಲ್-ಸೀಸನ್ ೨', ಸಹ ನಿರೂಪಕಿಯಾಗಿ. ೨೦೧೨ ರಲ್ಲಿ 'ಕೌನ್ ಬನೇಗಾ ಕ್ರೋರ್ಪತಿ ೬', ಅತಿಥಿ ಸ್ಪರ್ಧಿಯಾಗಿ(ರಾಮ್ ಕಪೂರ್ ಮತ್ತು ಅಮೃತ ಮುಖರ್ಜೀ ಜೊತೆ). ೨೦೧೩ ರಲ್ಲಿ 'ಕೌನ್ ಬನೇಗಾ ಕ್ರೋರ್ಪತಿ ೭', ಅತಿಥಿ ಸ್ಪರ್ಧಿಯಾಗಿ(ರಾಮ್ ಕಪೂರ್ ಜೊತೆ). ೨೦೧೫ ರಲ್ಲಿ 'ಕೋಡ್ ರೆಡ್', ನಿರೂಪಕಿಯಾಗಿ. ೨೦೧೭ ರಲ್ಲಿ 'ತ್ಯೋಹಾರ್ ಕೀ ತಾಲಿ', ನಿರೂಪಕಿಯಾಗಿ. == ಚಲನಚಿತ್ರಗಳು == ೨೦೦೬ - ಓ ರೇ ಮನ್ವಾ (ಸಂಧ್ಯಾ ಪಾತ್ರದಲ್ಲಿ) ೨೦೦೮ - ಸಿ ಕಂಪನೆ (ಕಿರು ಪಾತ್ರ) ೨೦೦೯ - ಸಲೂನ್ (ಸಸಿಜಿ ಪಾತ್ರದಲ್ಲಿ) ೨೦೦೯ - ಕಾಫಿ ಹೌಸ್ (ಕವಿತಾ ಪಾತ್ರದಲ್ಲಿ) ೨೦೧೧ - ಆತಂಕ್ವಾದಿ ಅಂಕಲ್ (ಸುಮಿತ್ರಾ ಪಾತ್ರದಲ್ಲಿ) ೨೦೧೧ - ಬಾವ್ರಾ ಮನ್ (ಪಲ್ಲವಿ ಪಾತ್ರದಲ್ಲಿ) ೨೦೧೫ - ಕತ್ಯರ್ ಕಲ್ಜತ್ ಗುಸಾಲಿ(ನಬೀಲಾ ಪಾತ್ರದಲ್ಲಿ) ೨೦೧೬ - ದಂಗಲ್ (ದಯಾ ಕೌರ್ ಪಾತ್ರದಲ್ಲಿ) ೨೦೧೮ - ಮೊಹೊಲ್ಲಾ ಅಸ್ಸಿ (ಸಾವಿತ್ರಿಯ ಪಾತ್ರದಲ್ಲಿ) ೨೦೨೦ - ಪೃತ್ವಿರಾಜ್ == ವೆಬ್ ಸರಣಿಗಳು == ೨೦೧೭ ಕರ್ಲೇ ತೂ ಭೀ ಮೊಹೊಬತ್ - ಡಾ.ತ್ರಿಪುರಸುಂದರಿ "ಟಿಪ್ಸೀ" ನಾಗರಾಜನ್ ಪಾತ್ರದಲ್ಲಿ (ಎಎಲ್ಟಿ ಬಾಲಾಜಿ) ೨೦೧೯ ದಿ ಫೈನಲ್ ಕಾಲ್ - ಎಟಿಸಿ ಕಿರಣ್ ಮಿರ್ಜಾ ಪಾತ್ರದಲ್ಲಿ(ಝೀ ಫೈವ್) ೨೦೧೯ ಮಿಷನ್ ಓವರ್ ಮಾರ್ಸ್ (ಝೀ ಫೈವ್/ಎಎಲ್ಟಿ ಬಾಲಾಜಿ) == ಚಲನಚಿತ್ರಗಳ ಪಟ್ಟಿ == == ಪ್ರಶಸ್ತಿಗಳು == == ಗೌರವಗಳು == ೨೦೧೩ ರಲ್ಲಿ ಅವರಿಗೆ ತೆರೆಯ ಅತ್ಯಂತ ಜನಪ್ರಿಯ ದಂಪತಿಗಾಗಿ ಮತ ದೊರೆಯಿತು.ಏಪ್ರಿಲ್ ೨೦೧೩ ರಲ್ಲಿ, ಓರ್ಮಕ್ಸ್ ಮೀಡಿಯಾ ನಡೆಸಿದ ಸಮೀಕ್ಷೆಯಲ್ಲಿ, ತನ್ವರ್ ರವರು ಅತ್ಯಂತ ವಿಶ್ವಾಸಾರ್ಹ ಟಾಪ್ ೫ ವ್ಯಕ್ತಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ. == ಉಲ್ಲೇಖಗಳು ==